October 7, 2025
IMG-20250429-WA0028

ಮಾನ್ವಿ,ಏ.3೦-ತಾಲೂಕಿನ ರಾಜಲಬಂಡ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಯಚೂರು ಗ್ರಾಮೀಣ ಶಾಸಕರು ಹಾಗೂ ಶ್ರೀಮಹರ್ಷಿವಾಲ್ಮೀಕಿ ನಿಗಮದ ರಾಜ್ಯಾಧ್ಯಕ್ಷರಾದ ಬಸವನಗೌಡ ದದ್ದಲ್ ಮಾತನಾಡಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಾಲ್ಯ ಇಲಾಖೆಯ ಅಧಿಕಾರಿಗಳು ಗ್ರಾಮೀಣಭಾಗದಲ್ಲಿನ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದAತೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಕುರ್ಡಿ ಹೋಬಳಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಈಭಾಗದ ಗ್ರಾಮಗಳಿಗೆ ಅಗತ್ಯವಾದ ಶುದ್ದಕುಡಿಯುವ ನೀರು ಪೂರೈಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಿ ಅಗತ್ಯವಿರುವ ಗ್ರಾಮಗಳಲ್ಲಿ ರೈತರ ಜಮೀನಿನಲ್ಲಿನ ಕೊಳವೇ ಬಾವಿಗಳನ್ನು ಬಾಡಿಗೆ ಅದಾರದಲ್ಲಿ ಪಡೆದುಕೊಂಡು ನೀರು ಪೂರೈಸಿ ತೀವ್ರ ಕುಡಿಯುವ ನೀರಿನ ತೊಂದರೆ ಇದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವಂತೆ ಹಾಗೂ ಬೇಸಿಗೆಯ ಎರಡು ತಿಂಗಳ ಕಾಲ ಗ್ರಾಮೀಣ ಭಾಗದಲ್ಲಿನ ಕೃಷಿ ಕೂಲಿಕಾರರಿಗೆ ನಿರಂತರವಾಗಿ ನರೇಗಾದಲ್ಲಿ ತಮ್ಮ ಗ್ರಾಮದಲ್ಲಿನ ಜಮೀನುಗಳ ನಾಲೆಗಳ ಉಳ್ಳೆತ್ತುವ ಕಾಮಗಾರಿಗಳನ್ನು ನೀಡಿದಲ್ಲಿ ವಲಸೆ ಹೋಗುವುದನ್ನು ತಪ್ಪಿಸಿ ರೈತರ ಜಮೀನುಗಳಿಗೆ ಮಳೆಗಾ ಲದಲ್ಲಿ ಸರಗವಾಗಿ ನೀರು ಹೋಗುವುದಕ್ಕೆ ಸಾಧ್ಯವಾಗುತ್ತದೆ ಹಾಗೂ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ತಡೆಗೊಡೆ ಹಾಗೂ ಶೌಚಾಲಯವನ್ನು ನರೇಗಾ ಯೋಜನೆಯಲ್ಲಿ ಕೈಗೊಳ್ಳಿ, ಎಂದು ತಾಲೂಕು ಪಂಚಾಯತ್ ಇ.ಓ. ಖಾಲೀದ್ ಅಹಮ್ಮದ್ ರವರಿಗೆ ಹಾಗೂ ಗ್ರಾಮ ಪಂಚಾಯಿತಿಗಳ ಪಿ.ಡಿ.ಒ,ಗಳಿಗೆ ಸೂಚಿಸಿದರು.

ಕುರ್ಡಿ ಹೋಬಳಿಯು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು ಈ ಭಾಗದಲ್ಲಿನ ವಸತಿ ಶಾಲೆಗಳು ಮಾನ್ವಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನೂತನ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಬಿ.ಸಿ.ಎಂ. ಇಲಾಖೆ,ಸಮಾಜ ಕಲ್ಯಾಣ ಇಲಾಖೆ, ಪ,ಪವರ್ಗಗಳ ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದಲ್ಲಿ ಸರ್ಕಾರದಿಂದ ಅನುದನ್ನು ಮಂಜೂರು ಮಾಡಿಸುವುದಕ್ಕೆ ಅನುಕೂಲ ವಾಗುತ್ತದೆ ಹಾಗೂ ಶಾಲೆಗಳನ್ನು ,ಹೈಸ್ಕೂಲ್ ಗಳನ್ನು ನಿರ್ಮಿಸುವುದಕ್ಕೆ ಬೇಕಾದ ಸರ್ಕಾರಿ ಜಮೀನುಗಳನ್ನು ಗುರುತಿಸಿ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿಡುವಂತೆ ತಹಸೀಲ್ದಾರ್ ಭೀಮರಾಯ ರಾಮದುರ್ಗರವರಿಗೆ ಸೂಚಿಸಿದರು. ಕುರ್ಡಿ ಹೋಬಳಿಯ ಸದಾಪುರ,ಸುಂಕೇಶ್ವರ,ಜೂಕೂರು,ಕAಬಳತಿ ಜೂಕೂರು,ಕುರ್ಡಿ,ಗ್ರಾಮಗಳಲ್ಲಿನ ಕಿರಿಯ ಶಾಲೆಗಳನ್ನು ಹೈಸ್ಕೂಲಿಗೆ ಮೆಲ್ದಾರ್ಜೆಗೇರಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಸೀಕಲ್ ಗ್ರಾಮದಲ್ಲಿ ನೂತನ ಶಾಲೆ ನಿರ್ಮಾಣಕ್ಕೆ ಹಾಗೂ ಹೆಚ್ಚುವರಿ ಶಾಲಾ ಕೋಠಡಿಗಳು ಅವಶ್ಯವಿರುವ ಶಾಲೆಗಳ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ.ಡಿ ರವರಿಗೆ ಸೂಚಿಸಿದರು.

ಅರೋಲಿ ಹಾಗೂ ಕುರ್ಡಿಗ್ರಾಮಗಳಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರು ನೀಡುತ್ತಿದ್ದು ಈ ಎರಡು ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಕಮಾಡುವಂತೆ ತಾ.ಆರೋಗ್ಯಧಿಕಾರಿ ಡಾ.ಶರಣಪ್ಪ ರವರಿಗೆ ಸೂಚಿಸಿದರು. ಕುರ್ಡಿ ಸೇರಿದಂತೆ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮಗಳಲ್ಲಿನ ಜನರಿಗೆ ಗುಣಮಟ್ಟದ ಮಧ್ಯಕ್ಕಾಗಿ ಸರಕಾರಿ ಎಂ.ಎಸ್.ಐ.ಎಲ್. ವತಿಯಿಂದ ಮಧ್ಯದ ಅಂಗಡಿಗಳನ್ನು ಪ್ರಾರಂಭಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಹಾಗೂ ಗಂಜಾ.ಅಕ್ರಮ ಮಧ್ಯಮಾರಾಟ ನಡೆಯುವುದನ್ನು ತಡೆಯುವಂತೆ ಅಬಕಾರಿ ಇಲಾಖೆಯ ಅಧಿಕಾರಿ ವೀರಮ್ಮರವರಿಗೆ ಸೂಚಿಸಿದರು. ರಾಜಲಬಂಡ ಆರ್.ಡಿ.ಎಸ್. ಅಣೆಕಟ್ಟೆಯ ಗೇಟ್ ಗಳನ್ನು ದುರಸ್ತಿ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಎ.ಇ.ವಿಜಯಕುಮಾರ ರವರಿಗೆ ಸೂಚಿಸಿದರು. ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾ.ಪಂ. ಇ.ಓ. ಖಾಲೀದ್ ಅಹಮ್ಮದ್, ತಹಸೀಲ್ದಾರ್ ಭೀಮರಾಯ ರಾಮದುರ್ಗ , ನೂತನ ಕೆಡಿಪಿ ಸದಸ್ಯರಾದ ಕೆ.ಹನುಮಂತಪ್ಪ, ಶಿಶುಅಭಿವೃದ್ದಿ ಅಧಿಕಾರಿ ಮನ್ಸೂರ್ ಅಹಮ್ಮದ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಟರಾಜ, ಬಿ.ಸಿ.ಎಂ.ಇಲಾಖೆಯ ಅಧಿಕಾರಿ ಭಾಗಯ್ಯನಾಯಕ,ತಾ.ಆರೋಗ್ಯಧಿಕಾರಿ ಡಾ.ಶರಣಪ್ಪ, ಕ್ಷೇತ್ರ ಶಿಕ್ಷಣ ಸಂಯೋಜಕರಾದ ಕುಬೇರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!