
ಮಾನ್ವಿ ,ಏ.3೦- ಕರ್ನಾಟಕ ರಾಜ್ಯದಲ್ಲಿ ಭತ್ತ ಅಭಿವೃದ್ಧಿ ಮಂಡಳಿ (ಬೋರ್ಡ್) ಸ್ಥಾಪನೆ ಮಾಡಬೇ ಕೆಂದು ತಹಸೀಲ್ದಾರ ಮೂಲಕ ಕೃಷಿ ಸಚಿವರಿಗೆ ಬಹುಜನ ಸಮಾಜ ಪಕ್ಷ ಮನವಿ ಸಲ್ಲಿಸಿತು.
ಭತ್ತ ಅಭಿವೃದ್ಧಿ ಮಂಡಳಿ (ಬೋರ್ಡ್) ಸ್ಥಾಪನೆ ಮಾಡಬೇಕು ಎಂದು ಅನೇಕ ರೈತರು, ರೈತಪರ ಸಂಘಟನೆಗಳು ಅಧಿಕಾರಕ್ಕೆ ಬರುವ ಎಲ್ಲಾ ಸರಕಾರಗಳಿಗೆ ಬೇಡಿಕೆ ಯನ್ನು ಮಂಡಿಸುತ್ತ ಬಂದಿದ್ದಾರೆ, ರಾಜ್ಯದಲ್ಲಿ ಅನೇಕ ಬೆಳೆಗಳಿಗೆ ಮಂಡಳಿಗಳಿವೆ (ಬೋರ್ಡಗಳು) ರೈತರ ಹಿತ ಕಾಯವುದರ ಜೊತೆಗೆ ಬೆಳೆಗಳಲ್ಲಿ ಅನೇಕ ಸುಧಾರಣೆಗಳಿಗೆ ಕೆಲಸ ಮಾಡುತ್ತೇವೆ ಆದರೆ ರಾಜ್ಯದಲ್ಲಿ ಬೆಳೆಯುವ ಪ್ರಮುಖ ಬೆಳೆಯಾದ ಭತ್ತಕ್ಕೆ ಮಾತ್ರ ಅಭಿವೃದ್ದಿ ಮಂಡಳಿ ಇಲ್ಲ, ಹೀಗಾಗಿ ಅತೀ ಹೆಚ್ಚು ಭತ್ತ ಬೆಳೆಯುವ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಬೆಳೆಗಳ ಸುಧಾರಣೆ, ಭತ್ತಕ್ಕೆ ಬೆಂಬಲ ಬೆಲೆ ಇನ್ನಿತರ ಮಾಹಿತಿ ಸೌಲಭ್ಯಗಳ ಕೊರತೆಯಾಗುತ್ತಿದೆ, ರಾಜ್ಯದಲ್ಲಿ ತುಂಗಭದ್ರ ಅಚ್ಚುಕಟ್ಟು ಪ್ರದೇಶ ವಾಗಿರುವ ಕೊಪ್ಪಳ, ರಾಯಚೂರು, ಬಳ್ಳಾರಿ, ಜಿಲ್ಲೆಗಳು ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಅನೇಕ ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ತಮ್ಮ ಪ್ರಮುಖ ಬೆಳೆಯನ್ನಾಗಿ ಭತ್ತವನ್ನು ಬೆಳೆಯುತ್ತಾರೆ, ರಾಜ್ಯದ ೧೮ ಜಿಲ್ಲೆಗ ಳಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ, ರಾಜ್ಯದಲ್ಲಿ ಪ್ರತಿ ವರ್ಷ ಸರಿ ಸುಮಾರು ಎಪ್ಪತ್ತು ಲಕ್ಷ ಟನ್ ಭತ್ತವನ್ನು ಬೆಳೆಯಲಾಗುತ್ತಿದೆ, ಇದಲ್ಲದೆ ಭತ್ತದ ಕಣಜ ಎಂಬ ಪ್ರಖ್ಯಾತಿಯನ್ನು ಕೂಡ ಹೊಂದಿರುವ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಜಿಲ್ಲೆಗಳಿಂದ ಬೆಳೆಯುವ ಭತ್ತಕ್ಕೆ ದೇಶ, ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಹೀಗಾಗಿ ಭತ್ತದ ಬೋರ್ಡಗಾಗಿ ಅನೇಕ ರೈತರಿಗೆ ಸರಕಾರವು ಉತ್ತೇಜನ ನೀಡಿದಂತಾಗುತ್ತದೆ, ಬೋರ್ಡ ಸ್ಥಾಪನೆ ಮಾಡುವುದರಿಂದ ಭತ್ತದ ಅನೇಕ ಹೊಸ ತಳಿಗಳ ಸಂಶೋಧನೆ ಕೈಗೊಳ್ಳಲು ಸಾಧ್ಯವಾಗುತ್ತದೆ, ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿಯಾಗಿಲ್ಲ ಇದರಿಂದ ಹೆಚ್ಚಿನ ರೈತರಿಗೆ ಸರಕಾರವು ಬೆಂಬಲ ಬೆಲೆಯನ್ನು ನಿಗದಿ ಮಾಡಲು ಅನುಕೂಲವಾಗುತ್ತದೆ ಭತ್ತದ ಬೆಲೆ ಇಳಿಯುತ್ತಿರುವುದರಿಂದ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ, ಪ್ರತಿ ಬೆಳೆಗಳು ಪ್ರಕೃತಿ ವಿಕೋಪ ಇನ್ನಿತರ ಸಮಸ್ಯೆಗಳು ರೈತರನ್ನು ಕಾಡುತ್ತಿವೆ ಭತ್ತದ ಉತ್ಪನ್ನಗಳಿಗೆ ಬಹಳ ಬೇಡಿಕೆಯಿದೆ ಭತ್ತದ ಪ್ರೋಸಸಿಂಗ್ ಘಟಕಗಳ ಸ್ಥಾಪನೆಯಿಂದ ಉದ್ಯೋಗವಕಾಶಗಳು ದೊರೆಯುತ್ತವೆ.
ತುಂಗಭದ್ರ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಭತ್ತದ ಬೋರ್ಡ ಸ್ಥಾಪನೆ ಮಾಡುವುದು ಉತ್ತಮ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ಸರಕಾರಕ್ಕೆ ಈಗಾಗಲೇ ವರದಿಯನ್ನು ನೀಡಿ ವರ್ಷಗಳು ಕಳೆದಿವೆ ಸರಕಾರವು ಇದನ್ನು ಪರಿಶೀಲಿಸಬೇಕು ರಾಜ್ಯದಲ್ಲಿ ಅತೀ ಹೆಚ್ಚು ಜನರು ಭತ್ತದ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ, ಆದರೆ ಭತ್ತ ಬೆಳೆಯುವ ರೈತರು ಒಂದಿಲ್ಲೊAದು ಸಂಕಷ್ಟಗಳನ್ನು ಎದುರಿಸುತ್ತ ಬರುತ್ತಿದ್ದಾರೆ, ಹೀಗಾಗಿ ಸರಕಾರವು ಕೂಡಲೇ ಭತ್ತದ ಅಭಿವೃದ್ಧಿ ಮಂಡಳಿಯ ಸ್ಥಾಪನೆ ಮಾಡುವಲ್ಲಿ ಮುಂದಾಗಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಮುಂದಾಗಬೇಕೆAದು ಬಹುಜನ ಸಮಾಜ ಪಕ್ಷವು ಮನವಿ ಪತ್ರದ ಮೂಲಕ ಸರಕಾರವು ಕ್ರಮ ಕೈಗೊಳ್ಳಲು ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಶ್ಯಾಮಸುಂದರ ಕುಂಬದಾಳ, ಮಾನ್ವಿ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಬಸವರಾಜ ನಿಲೋಗಲ್, ರಮೇಶ ನಾಯಕ ಗವಿಗಟ್, ವಿರುಪನಗೌಡ ಜಟ್ಟಿ, ನಾಗಪ್ಪ ನಾಯಕ ಇತರರು ಇದ್ದರು.