
ಮಾನ್ವಿ,ಏ.3೦-ಮಾನ್ವಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಕೊಟ್ನೆಕಲ್ ಜಿಲ್ಲಾ ಪಂಚಾ ಯಿತಿ ವ್ಯಾಪ್ತಿಯ ಮುಸ್ಟೂರು ಹಾಗೂ ಜಾಗೀರ ಪನ್ನೂರು ಗ್ರಾಮಗಳ ನಡುವಿನ ರಸ್ತೆಯಲ್ಲಿ ಸುಮಾರು ೨.೬೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾ ಣವಾಗಲಿರುವ ಬಾಕ್ಸ್ ಕಲ್ವ ರ್ಟ್ ಕಾಮಗಾರಿಗೆ ಮಂಗಳ ವಾರ ಶಂಕುಸ್ಥಾಪನೆ ನೆರವೇರಿ ಸಲಾಯಿತು.
ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ್ ಸಾಹುಕಾರ್ ಅವರು ಈ ಕಾಮಗಾರಿಗೆ ಚಾಲನೆ ನೀಡಿ ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಮತ್ತು ಶಾಸಕರು, ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಿ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ ಅವರಿಗೆ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರಂಟಿ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ ವಕೀಲರು, ಬಾಲಸ್ವಾಮಿ ಕೊಡ್ಲಿ, ಗುಡದಿನ್ನಿ ಶರಣಯ್ಯ ನಾಯಕ್, ನರಸಪ್ಪ ರಬ್ಬಣಕಲ್, ಸೈಯದ್ ಖಾಲಿದ್ ಖಾದ್ರಿ, ಮಹಾಂತೇಶಸ್ವಾಮಿ ರೌಡೂರು, ಚಾಂದ್ ಪಾಷಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.