ಯುವಮಾರ್ಗ ಸುದ್ದಿ
ಮಾನ್ವಿ,ಡಿ.12-ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತವಾಗಿ ಮಾನ್ವಿ ಪೊಲೀಸ್ ಠಾಣಾ ವತಿಯಿಂದ ಪಟ್ಟಣದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಅಪರಾಧ ತಡೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಾನ್ವಿ ಪೊಲೀಸ್ ಠಾಣೆಯ ಪಿಎಸ್‌ಐ ಅಜ್ಮೀರ್ ಅವರು ಮಾತನಾಡಿ, “ವಿದ್ಯಾರ್ಥಿ ಗಳು ದುಶ್ಚಟಗಳಿಂದ ದೂರವಿರಬೇಕು. ಯಾವುದೇ ರೀತಿಯ ಕೆಟ್ಟಚಟುವ ಟಿಕೆಗಳಿಗೆ ಬಲಿಯಾಗದೆ, ಉತ್ತಮ ಪ್ರಜೆ ಗಳಾಗಿ ರೂಪುಗೊಳ್ಳಬೇಕು. ಸಾರ್ವಜ ನಿಕರು ಹಾಗೂ ವಿದ್ಯಾರ್ಥಿಗಳು ಕಾನೂ ನನ್ನು ಗೌರವಿಸಬೇಕು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರಿಗೆ ಸಹಕಾರ ನೀಡಬೇಕು. ಸೈಬರ್ ಅಪರಾ ಧಗಳ ಬಗ್ಗೆ ವಿದ್ಯಾರ್ಥಿಗಳು ಜಾಗರೂ ಕರಾಗಿರಬೇಕು” ಎಂದು ಸಲಹೆ ನೀಡಿ ದರು.ಸಮಾಜದಲ್ಲಿನ ಅಪರಾಧಗಳ ಸ್ವರೂಪ, ಅಪರಾಧಗಳು ಸಂಭವಿಸದAತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ಅಪರಾಧಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವ ಕುರಿತು ವಿವರವಾಗಿ ತಿಳಿಸಿದರು.
ಎಎಸ್ ಐ ಹನುಮೇಶ್,ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮನೋಜ್ ಕುಮಾರ್ ಮಿಶ್ರಾ, ಕಾರ್ಯದರ್ಶಿಗಳು ಅನಿಲಕುಮಾರ್ ಹೆಚ್, ಅಂಜನೇಯ ಹೆಚ್, ಪ್ರಾಚರ್ಯರಾದ ರೇಣುಕಾ, ಶಿವುಕುಮಾರ್ , ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
