
ಆಸ್ಪತ್ರೆ ನೀಡುವರಿಗೂ ಹೋರಾಟ ನಿಲ್ಲದು ಶಾಸಕ ವಜ್ಜಲ್
ಲಿಂಗಸುಗೂರು ಜೂ.೩: ಲಿಂಗಸುಗೂರಿಗೆ ಜಿಲ್ಲಾ ಆಸ್ಪತ್ರೆ ಘೋಷಣೆ ಮಾಡಿ ಕೈತಪ್ಪಿಸಿದ ಸರ್ಕಾರದ ನಡೆ ಖಂಡಿಸಿ ನಾನಾ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದ ಲಿಂಗಸುಗೂರು ಬಂದ್ ಮಂಗಳವಾರ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣದ ಈಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದ ವೃತ್ತದ ವರೆಗೆ ಪ್ರತಿಭಟನಾ ಮೆರವಣ ಗೆ ನಡೆಸಿದರು. ಬಂದ್‌ನಿAದಾಗಿ ಬೆಳಗ್ಗೆಯಿಂದಲೆ ವ್ಯಾಪಾರಸ್ತರು ಅಂಗಡಿ-ಮುAಗಟ್ಟು, ಹೊಟೇಲ್ ಸೇರಿದಂತೆ ಬೀದಿ ಬದಿಯ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲಿಸಿದರು.
ಇದರ ಜೊತೆಗೆ ಶಾಲಾ-ಕಾಲೇಜುಗಳು ಬಂದ್‌ಗೊಳಿಸಲಾಗಿತ್ತು. ಬಸ್ ನಿಲ್ದಾಣದ ವೃತ್ತದಲ್ಲಿ ಟೈರ್ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಜೊತೆಗೆ ಬೆಳಗ್ಗೆ ೧೦ ಗಂಟೆಯಿoದಲೆ ಸಾರಿಗೆ ಬಸ್ಸುಗಳ ಸಂಚಾರವನ್ನು ಹೋರಾಟಗಾರರು ಬಂದ್‌ಗೊಳಿಸಿ ೨೦೦ ಹಾಸಿಗೆಗಳ ಜಿಲ್ಲಾಸ್ಪತ್ರೆ ಲಿಂಗಸುಗೂರಿಗೆ ನೀಡಿ ಬಳಿಕ ಸಿಂಧನೂರಿಗೆ ವರ್ಗಾಯಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಬಹಿರಂಗೆ ಸಭೆ ನಡೆಸಿ ಮಾತನಾಡಿದ, ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ೨೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಯನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಟೆಂಡರ್ ಕರೆಯುವ ಹಂತದಲ್ಲಿ ಏಕಾಏಕಿ ಸಿಂಧನೂರಿಗೆ ವರ್ಗಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದೆ. ಅದು ತನಗೆ ಇಷ್ಟಬಂದAತೆ ಅಧಿಕಾರಿ ಚಲಾಯಿಸಿದೆ. ಇದಕ್ಕೆ ಲಿಂಗಸುಗೂರು ಮೀಸಲು ಕ್ಷೇತ್ರವಾಗುವ ಜೊತೆಗೆ ನಾನು ಬಿಜೆಪಿ ಶಾಸಕನಾಗಿರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ ಇದರಿಂದ ಎದೆಗುಂದದೆ ೨೦೦ರ ಬದಲು ೨೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಮಂಜೂರು ಆಗುವವರೆಗೂ ಕ್ಷೇತ್ರದ ಜನರು ಹಾಗೂ ದಲಿತ, ಕನ್ನಡ, ಪ್ರಗತಿಪರ ಸಂಘಟನೆಗಳೊAದಿಗೆ ಹೋರಾಟಕ್ಕಿಳಿಯುವುದಾಗಿ ಹೇಳಿದರು.
ಆರ್.ಮಾನಸಯ್ಯ ಮಾತನಾಡಿ, ಲಿಂಗಸುಗೂರಿಗೆ ಸರ್ಕಾರ ಮಂಜೂರಿ ಮಾಡಿದ ೨೦೦ ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯನ್ನು ಸಿಂಧನೂರಿಗೆ ವರ್ಗಾವಣೆ ಮಾಡಿರುವುದು ಲಿಂಗಸುಗೂರು ಹಾಗೂ ಸಿಂಧನೂರು ಜನರುಗಳ ಮದ್ಯೆ ವಿರಸ, ದ್ವೇಷ, ಅವಿಶ್ವಾಸ, ಅಪನಂಬಿಕೆ ಬೆಳೆಯುವಂತೆ ಮಾಡಿದೆ. ಇದು ವಿಕೃತ, ನೀಚ ರಾಜಕಾರಣ ಪ್ರವೃತ್ತಿಯಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಹೋರಾಟಗಾರರು ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಲಿಂಗಸುಗೂರಿನಿAದ ವರ್ಗಾವಣೆಯಾಗಿರುವ ೨೦೦ ಹಾಸಿಗೆಗಳ ಸಾಮಾರ್ಥ್ಯದ ಆಸ್ಪತ್ರೆ ಮರಳಿ ಲಿಂಗಸುಗೂರಿಗೆ ನೀಡಬೇಕು ಇಲ್ಲದೇ ಹೋದರೆ ಲಿಂಗಸುಗೂರು ಜಿಲ್ಲಾ ಕೇಂದ್ರ ಎಂದು ಘೋಷಣೆ ಮಾಡಬೇಕು. ಇದಕ್ಕೆ ಬೇಕಾದ ಹೋರಾಟ ತಯಾರಿ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್ ಮಾತನಾಡಿ, ಪಕ್ಷಕ್ಕಿಂತ ಜನರ ಹಿತಾಸಕ್ತಿ ಪ್ರಮುಖವಾಗಿದೆ. ಜಿಲ್ಲಾಸ್ಪತ್ರೆ ಸಿಂಧನೂರಿಗೆ ವರ್ಗ ಮಾಡಿರುವುದು ಸರ್ಕಾರದ ಕ್ರಮ ಸರಿಯಾದುದಲ್ಲ. ಕೂಡಲೇ ಇದರ ಕುರಿತು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪರು, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಲಿಂಗಸುಗೂರಿಗೆ ಜಿಲ್ಲಾಸ್ಪತ್ರೆಗಾಗಿ ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಚರ್ಚೆ ಮಾಡಲಾಗುವುದು. ತಾಲೂಕಿಗೆ ಆಗಿರುವ ಅನ್ಯಾಯದ ವಿರುದ್ದ ಪಕ್ಷಾತೀತವಾಗಿ ಹಾಗೂ ಸಂಘಟನೆಗಳ ಜೊತೆಗೆ ನಿಲ್ಲುವುದಾಗಿ ಹೇಳಿದರು.
ಹಾಲಿ ಮಾಜಿ ಶಾಸಕರ ವಿರುದ್ದ ಘೋಷಣೆ : ೨೦೦ ಹಾಸಿಗೆಗಳ ಜಿಲ್ಲಾಸ್ಪತ್ರೆಗಾಗಿ ಕರೆ ನೀಡಿದ್ದ ಬಂದ್ ವೇಳೆ ಹಾಲಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮದ್ಯಾಹ್ನ ಆಗಮಿಸಿದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಬರೆ ಮನವಿಯನ್ನು ಸಲ್ಲಿಸಿದರು.
ಬಂದ್ ಹೋರಾಟದಲ್ಲಿ ರೈತ ಸಂಘ, ದಲಿತ ಸಂಘಟನೆ, ಕನ್ನಡಪರ ಸಂಘಟನೆಗಳು, ಪ್ರಗತಿಪರ ಹಾಗೂ ನಾನಾ ಜಾತಿ ಸಮುದಾಯಗಳ ಸಂಘಟನೆಗಳ ಮುಖಂಡರುಗಳಾದ ಹನುಮಂತಪ್ಪ ಕುಣೆಕೆಲ್ಲೂರು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ ಕರಡಲ್, ನ್ಯಾಯವಾದಿಗಳಾದ ಸಿ.ಸಿ ಕರಡಕಲ್, ಕುಪ್ಪಣ ಮಾಣ ಕ್, ಎಂ.ಗoಗಾಧರ, ಪುರಸಭೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡನಗೌಡ ಹೊಸಮನಿ, ಸದಸ್ಯ ಪ್ರಮೋದ ಕುಲಕಣ ð, ವೀರನಗೌಡ ಲೆಕ್ಕಿಹಾಳ, ಅಯ್ಯಪ್ಪ ಮಾಳೂರು, ಡಾ.ಸುಭಾಸ್ ಪಲ್ಲೇದ, ಲಿಂಗಪ್ಪ ಪರಂಗಿ, ಜಿಲಾನಿ ಪಾಶ, ತಿಮ್ಮಾರೆಡ್ಡಿ, ಮುನ್ನೂರು, ಡಿ.ಬಿ ಸೋಮನಮರಡಿ, ಪ್ರಭುಲಿಂಗ ಮೇಗಳಮನಿ, ಶಿವಪುತ್ರಗೌಡ ನಂದಿಹಾಳ, ಕವಿ ಪ್ರಶಾಂತ ದಾನಪ್ಪ, ಲಾಲಪ್ಪ ನಾಯ್ಕ, ಇಮ್ತಿಯಾಜ್ ಪಾಶ, ಗದ್ದೆನಗೌಡ, ಅಮರೇಶಪ್ಪ ಹುನೂರು, ಎಂ.ಸಿ ಚಂದ್ರಶೇಖರ, ಮಾದೇಶ ಸರ್ಜಾಪುರ, ಅಂಜನೇಯ ಭಂಡಾರಿ, ವೀರನಗೌಡ ಐದನಾಳ, ಐದನಾಳ, ಹನುಮಂತ ನಾಯಕ, ನಾಗರಾಜ ತಿಪ್ಪಣ್ಣ, ಅಮರೇಶ ಸ್ವಾಮಿ ಗಂಬೀರ ಮಠ, ವಿನಯ ಕುಮಾರ್ ಗಣಾಚಾರಿ, ಶಾಂತನಗೌಡ ದಿದ್ದಿಗಿ ಸೇರಿದಂತೆ ನಾನಾ ಸಂಘಟನೆಗಳ ಪ್ರಮುಖ ಬಂದ್ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.