
ಮಾನ್ವಿ,ಮೇ.6– ಮಾದಿಗ ಸಮುದಾಯಕ್ಕೆ ಒಳಮೀಸ ಲಾತಿ ನೀಡುವಂತೆ ಆಗ್ರಹಿಸಿ ಕಳೆದ ೩೫ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ಸರ್ಕಾರವು ಈ ಬೇಡಿಕೆ ಯನ್ನು ನಿರ್ಲಕ್ಷಿಸುತ್ತಿದೆ ಎಂದು ಒಳಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ಸಂಚಾಲಕರಾದ ಜಯಪ್ರಕಾಶ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೂ ಸ ರ್ಕಾರಿ ಹುದ್ದೆಗಳ ನೇರ ನೇ ಮಕಾತಿ, ಬ್ಯಾಕ್ ಲಾಗ್ ಮತ್ತು ಮುಂಬಡ್ತಿ ಆದೇಶಗಳನ್ನು ಮಾಡದಂತೆ ಒತ್ತಾಯಿಸಿ ಬಿ. ಆರ್.ಭಾಸ್ಕರ್ ಪ್ರಸಾದ್ ಅವರ ನೇತೃತ್ವದಲ್ಲಿ ಹೊಸ ಪೇಟೆ ಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಾಗೂ ಹೋ ರಾಟಗಾರರ ರಥಯಾತ್ರೆ ಹಮ್ಮಿ ಕೊಳ್ಳಲಾಗಿದೆ.
ಈ ಪಾದಯಾತ್ರೆ ಮತ್ತು ರಥಯಾತ್ರೆಯು ಮೇ ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಮಾನ್ವಿ ಪಟ್ಟಣಕ್ಕೆ ಆಗಮಿಸ ಲಿದೆ. ಡಾ. ಅಂಬೇಡ್ಕರ್ ವೃತ್ತ ದಿಂದ ಮೆರವಣಿಗೆಯ ಮೂ ಲಕ ಹೋರಾಟಗಾ ರರನ್ನು ಬರಮಾಡಿಕೊಳ್ಳಲಾ ಗುವುದು. ನಂತರ ಪಟ್ಟಣದ ಟಿ.ಡಿ.ಪಿ.ಸಿ. ಎಸ್. ಬೈಲು ಜಾಗದಲ್ಲಿ ಸ್ವಾಭಿ ಮಾನಿ ಮಾದಿಗ ಹೋರಾಟ ಗಾರರ ಸಮಾವೇಶ ನಡೆಯ ಲಿದೆ. ಇದೇ ಸಂದರ್ಭದಲ್ಲಿ ಒಳಮೀಸಲಾತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನದಾಸ್ ನೇತೃತ್ವದ ಆಯೋಗವು ಮೇ ೫ ರಿಂದ ೧೭ ರವರೆಗೆ ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ನಡೆಸಲಿದ್ದು, ೧೦೧ ಪರಿಶಿಷ್ಟ ಜಾತಿಗಳ ಪಟ್ಟಿಯ ಕ್ರಮ ಸಂಖ್ಯೆ ೬೧ ರಲ್ಲಿ ಬೇರೆ ಉಪಜಾತಿಗಳನ್ನು ಬರೆಯದೆ ಹಿಂದುಳಿದ ಮಾದಿಗ ಎಂದು ಮಾತ್ರ ಬರೆಯಬೇಕು ಎಂದು ಜಯಪ್ರಕಾಶ್ ಮನವಿ ಮಾಡಿದರು.
ಮೇ ೭ ರಂದು ರಾಯಚೂರು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ, ಬ್ಯಾಕ್ ಲಾಗ್ ಮತ್ತು ಮುಂಬಡ್ತಿ ಆದೇಶಗಳನ್ನು ಮಾಡದಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮೂಕಪ್ಪ ಕಟ್ಟಿಮನಿ, ಸುಂದರ್ ಕಪಗಲ್, ಪಿ.ರವಿಕುಮಾರ್ ವಕೀಲರು, ಯಲ್ಲಪ್ಪ ಬಾದರದಿನ್ನಿ, ತಾಯಪ್ಪ ಬಿ.ಹೊಸೂರು, ಪ್ರಭುರಾಜ ಕೊಡ್ಲಿ, ಹನುಮಂತಪ್ಪ ಕೋಟೆ, ಗಣೇಶ್ ಸಂಗಾಪುರ್, ಯಲ್ಲಪ್ಪ ಸೀಕಲ್, ಪ್ರದೀಪ್ ಕಪಗಲ್, ಯೇಸು ಸೇರಿದಂತೆ ಇತರರು ಉಪಸ್ಥಿತರಿದ್ದರು.