March 15, 2026
IMG-20251212-WA0001

ಯುವಮಾರ್ಗ ಸುದ್ದಿ

ಮಾನ್ವಿ,ಡಿ.12-ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕವತಿಯಿಂದ ತಹಸೀಲ್ದಾರ್ ರವರಿಗೆ ಗ್ರೇಡ್-೨ ತಹಸೀ ಲ್ದಾರ್ ಅಬ್ದುಲ್ ವಾಹಿದ್ ರವರ ಮೂ ಲಕ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್ ಮಾತ ನಾಡಿ ತಾಲೂಕಿನಲ್ಲಿ ಜೋಳ ಬೆಳೆದ ರೈತರ ಜಮೀನುಗಳನ್ನು ಜಿ.ಪಿ.ಎಸ್. ಮಾಡಿ ಬೆಂಬಲ ಬೆಲೆ ಅಡಿಯಲ್ಲಿ ರೈತರಿಂದ ಜೋ ಳವನ್ನು ಖರೀದಿ ಮಾಡುವುದಕ್ಕೇ ಕೂಡಲೆ ನೊಂದಾಣಿ ಪ್ರಾರಂಭಿಸಬೇಕು , ತಾಲೂ ಕಿನಲ್ಲಿ ರೈತರ ಅನುಕೂಲಕ್ಕೆ ತಕ್ಕಂತೆ ಜೋ ಳ,ಭತ್ತ,ತೊಗರಿ ಖರೀದಿಗೆ ಅಗತ್ಯ ಸಂಖ್ಯೆ ಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿ ಸಬೇಕು, ಹತ್ತಿ ಬೆಳೆದ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟಕ್ಕೆ ಇರುವ ತೊಂದರೆಗಳನ್ನು ನಿವಾರಿಸಬೇಕು ಹಾಗೂ ನೊಂದಾಣಿಯಲ್ಲಿ ಇರುವಂತ ಸಮಸ್ಯೆU Àಳನ್ನು ಸರಿಪಡಿಸಬೇಕು.ಗ್ರಾಮೀಣ ಭಾಗದ ರಸ್ತೆಗಳು ಹಾಳಗಿದ್ದು ಅವುಗಳನ್ನು ಸರಿಪಡಿ ಸಬೇಕು.ವಿದ್ಯುತ್ ತೊಂದರೆಗಳನ್ನು ನಿವಾರಿ ಸಬೇಕು, ಮಾನ್ವಿ ಪಟ್ಟಣದಲ್ಲಿ ಕೃಷಿ ಉತ್ಪನ್ನ ಕೇಂದ್ರದಿAದ ನಡೆಯುತ್ತಿದ ಜಾನುವಾ ರುಗಳ ಮಾರಾಟದ ಸಂತೆ ರದ್ದಾಗಿರುವುz Àರಿಂದ ರೈತರು ಜಾನುವಾರುಗಳನ್ನು ಖರೀ ದಿಸುವುದಕ್ಕೆ ಹಾಗೂ ಮಾರಾಟ ಮಾಡು ವುದಕ್ಕೆ ತೊಂದರೆಯಾಗಿರುವುದರಿAದ ಕೂಡಲೆ ದನ ಮತ್ತು ಕುರಿ ಸಂತೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದರು.ಗ್ರೇಡ್-೨ ತಹಸೀ ಲ್ದಾರ್ ಅಬ್ದುಲ್ ವಾಹಿದ್ ಮನವಿ ಸ್ವೀಕರಿಸಿ ಮಾತನಾಡಿ ರೈತರ ಸಮಸ್ಯೆಗಳ ನಿವಾರಣೆಗಾಗಿ ಸಂ ಬಂದಿಸಿದ ಇಲಾಖೆಯ ಅಧಿಕಾರಿಗಳ ಹಾಗೂ ರೈತ ಸಂಘದ ಪ್ರಾತಿನಿಧಿಗಳ ಸ ಭೆಯನ್ನು ನಡೆಸಿ ಪರಿಹಾರ ಕಂಡು ಕೊ ಳ್ಳಲಾಗುವುದು ಎಂದು ಬರವಸೆ ನೀಡಿ ದರು.ಪಟ್ಟಣದ ಶಾಸಕರ ಭವನದ ಆವರ ಣದಲ್ಲಿ ಬೆಳ್ಳಿಗೆ ಯಿಂದ ನೂರಾರು ರೈತರು ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಪ್ರತಿಭ ಟನೆ ನಡೆಸಿ ನಂತರ ಸ್ಥಳಕ್ಕೆ ಆಗಮಿಸಿದ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿ ದ್ ಹಾಗೂ ಕೃಷಿ ಇಲಾಖೆಯ ತಾ.ಸ ಹಾಯಕ ನಿರ್ದೇಶಕರಾದ ಗುರುನಾಥ ಭೂಸನೂರ್ ರವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಉಪಾಧ್ಯಕ್ಷರಾದ ದೊಡ್ಡಬಸವನ ಗೌಡ ಬಲ್ಲಟ್ಟಗಿ, ರಾಜ್ಯ ಕಾರ್ಯದರ್ಶಿ ಗಳಾದ ಯಂಕಪ್ಪ ಕಾರಬಾರಿ, ಸೂಗುರ ಯ್ಯ ಆರ್.ಎಸ್.ಮಠ,ಬಸವರಾಜ ಮಾಲಿ ಪಾಟೀಲ್, ಬೂದಯ್ಯಸ್ವಾಮಿ ಸಿದ್ದಯ್ಯಸ್ವಾ ಮಿ ಗೋರ್ಕಲ್, ಮಲ್ಲಣ್ಣದಿನ್ನಿ, ಹೆಚ್.ಶಂ ಕ್ರಪ್ಪ ದೇವತ್‌ಗಲ್, ದೇವರಾಜ ನಾಯಕ, ಅಮರೇಸ ಅಲ್ದಾಳ್, ಚಂದ್ರಶೇಖರ ,ಹನು ಮಂತ, ದೇವೆಂದ್ರಪ್ಪ, ಶಿವರಾಜ, ಚನ್ನಬ ಸವ ಗವಿಗಟ್ಟ, ಶರಣಪ್ಪ, ಬ್ರಹ್ಮಯ್ಯ, ನಿಬಿ ಸಾಬ್, ಹನುಮಂತ.ಎA. ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!