
ಮಾನ್ವಿ:ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಉಪತಹಸೀಲ್ದಾರ್ ವಿನಾಯಕರಾವ್ ಮೂಲಕ ಮನವಿ ರಾಜ್ಯಾಧ್ಯಕ್ಷ ಹೆಚ್.ಹನುಮಂತ ಸೀಕಲ್ ಮಾತನಾಡಿ ತಾಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳಿಗೆ ಕೂಡಲೆ ಟೆಂಡರ್ ಕರೆಯಬೇಕು, ತಾ.ಪಂ. ಹಳೆ ಕಟ್ಟಡವನ್ನು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಇತರ ಇಲಾಖೆಗಳಿಗೆ ನೀಡಬೇಕು,ಕೆ.ಆರ್.ಡಿ.ಇ.ಎಲ್ ಮತ್ತು ಕ್ಯಾಸೋಟಿಕ್ ಇಲಾಖೆಯಿಂದ ನಿರ್ಮಾಣ ಮಾಡಲಾದ ಶಾಲಾ ಕಟ್ಟಡ ಕಾಮಗಾರಿ ಅತ್ಯಂತ ಕಳೆಪೆಯಾಗಿರುವುದರಿಂದ ತನಿಖೆ ನಡೆಸಬೇಕು, ತಾಲೂಕಿನ ಸುಂಕೇಶ್ವರ ಹಾಗೂ ಅರೋಲಿ ಗ್ರಾಮ, ಪಂಚಾಯಿತಿ ವತಿಯಿಂದ 15 ನೇ ಹಣಕಾಸು ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಕೊಂಡಿರುವುದರಿAದ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ಪಿ.ಡಿ.ಓ ಹಾಗೂ ತಾ.ಪಂ. ಇ.ಓ. ರವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತಪರ ಸಂಘಟನೆಗಳ ಹೋರಾಟಗಾರರಾದ ಹನುಮಂತ ಉದ್ಬಳ್,ನರಸಪ್ಪ ಜೂಕೂರು,ಮಲ್ಲೇಶಪ್ಪ ಅಮರೇಶ್ವರ ಕ್ಯಾಂಪ್,ಬAಡೆಗುರು,ಹನುಮAತ ಬೈಲ್ ಮಾರ್ಚೆಡ್, ಮೌನೇಶ ನಕ್ಕುಂದಿ, ಸೇರಿದಂತೆ ಇನ್ನಿತರರು ಇದ್ದರು.