ಮಸ್ಕಿ,ಡಿ.11- ಪ್ರತಿಯೊಬ್ಬರು ತೆರಿಗೆ ಪಾವತಿ ಸುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಸಹಕರಿಸಬೇಕು ಎಂದು ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಸಲಹೆ ನೀಡಿದರು.
ತಾಲೂಕಿನ ಪಾಮನಕಲ್ಲೂರು ಗ್ರಾಮ ದಲ್ಲಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿಕೇಂದ್ರಿಕೃತ ಆಡಳಿತ ವ್ಯವಸ್ಥೆ ಯಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮಹತ್ವದ್ದಾಗಿದೆ. ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳು, ಅರಿವು ಕೇಂದ್ರ ಗಳ ನಿರ್ವಹಣೆ, ಸಮುದಾಯದ ಆರೋ ಗ್ಯ ಕಾಪಾಡಲು ಕೈಗೊಳ್ಳುವ ಸ್ವಚ್ಛತಾ ಕಾರ್ಯಗಳು ಸೇರಿ ಗ್ರಾಮೀಣ ಪ್ರದೇಶದ ಜನರು ಒಂದಲ್ಲ ಒಂದು ಕಾರ್ಯಕ್ಕೆ ಗ್ರಾಮ ಪಂಚಾಯತಿಗಳನ್ನು ಆಶ್ರಯಿಸುತ್ತಾರೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲಗಳ ಬಳಕೆ ಮೂಲಕ ಸದೃಢವಾಗಿ ಕಾರ್ಯನಿರ್ವಹಿಸುವಂ ತಾಗಲು ಸ್ಥಳೀಯರ ಸಹಕಾರ ಅಗತ್ಯ. ಹೀಗಾಗಿ, ರಾಯಚೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇ ಶದ ಮೇರೆಗೆ ಪ್ರತಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನ ಏರ್ಪಡಿಸಲಾಗಿದೆ ಎಂದು ಹೇಳಿದರು. ತಾಲೂಕಿಗೆ ನಿಗದಿಗೊ ಳಿಸಿದ ಒಂದು ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗುವುದು. ತೆರಿಗೆ ಪಾವತಿಸುವವರಿಗೆ ಗ್ರಾಪಂಯಿAದ ಡಿಜಿಟ ಲ್ ರಸೀದಿ ವಿತರಿಸುತ್ತಿದ್ದು, ಆಸ್ತಿಗೆ ಸಂಬA ಧಿಸಿದಂತೆ ಮುಂದೆ ಎದುರಾಗಬ ಹುದಾದ ತಕಾರರುಗಳಿಗೆ ಸೂಕ್ತ ದಾಖಲೆ ಯಾಗ ಲಿದೆ. ಹೀಗಾಗಿ ಪ್ರತಿಯೊಬ್ಬರು ತೆರಿಗೆ ಪಾವತಿಸಿ, ಸರ್ಕಾರದ ಆಶಯ ಈಡೇರಿ ಸಬೇಕು ಎಂದರು. ತದ ನಂತರ ಅಮೀನ ಗಡ, ವಟಗಲ್, ಹಾಲಾಪುರ, ತೋರಣ ದಿನ್ನಿ, ಹಿರೇದಿನ್ನಿ, ಮಲ್ಲದಗುಡ್ಡ ಗ್ರಾಪಂಗೆ ಭೇಟಿ ನೀಡಿ, ತೆರಿಗೆ ವಸೂಲಾತಿ ಅಭಿಯಾ ನವನ್ನು ಖುದ್ದು ಪರಿಶೀಲಿಸಿದರು.
ಸಹಾಯಕ ನಿರ್ದೇಶಕರಾದ (ಪಂ .ರಾ) ಸೋಮನಗೌಡ ಪಾಟೀಲ್ ಸಂತೆಕ ಲ್ಲೂರು, ಅಂಕುಶದೊಡ್ಡಿ, ಅಡವಿಬಾವಿ (ಮಸ್ಕಿ), ಮಾರಲದಿನ್ನಿ, ಮೆದಕಿನಾಳ, ಕನ್ನಾಳ, ಮಟ್ಟೂರು, ತಲೇಖಾನ್, ಸಹಾ ಯಕ ನಿರ್ದೇಶಕರಾದ (ಗ್ರಾ.ಉ) ಶಿವಾನಂ ದರಡ್ಡಿ ಕೊಳಬಾಳ, ಬಪ್ಪೂರು, ಗುಂಡ, ಗುಡದೂರು, ಉದ್ಬಾಳ, ಗೌಡನಬಾವಿ ಗ್ರಾಪಂಗೆ ತೆರಿಗೆ ವಸೂಲಾತಿ ಅಭಿಯಾನದ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿ ಸಲಾಗಿತ್ತು. ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಗಳು, ಕರವಸೂಲಿಗಾರರು, ಗ್ರಾಪಂ ಸಿಬ್ಬಂದಿ ಇದ್ದರು.
