ಮಾನ್ವಿ,ಡಿ.11-ತಾಲೂಕಿನ ಚಿಮ್ಲಾಪುರ ಗ್ರಾಮದಲ್ಲಿ ವಿಶ್ವ ಮಾನವ ಹಕ್ಕುಗಳ ದಿನದ ಅಂಗವಾಗಿ ಹಕ್ಕುಗಳ ಕುರಿತಾದ ಸಾಮಾಜಿಕ ಅರಿವಿನ ನಾಟಕ ಮತ್ತು ನೃತ್ಯಗಳ ಮುಖಾಂತರ ಜಾಗೃತಿ ಕಾರ್ಯ ಕ್ರಮವನ್ನು ಗ್ರಾಮದ ಮಾರಿಕಾಂಭಾ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಲೊಯೋಲ ಸಮಾಜ ಸೇವಾ ಕೇಂದ್ರ, ಮಾನ್ವಿ ಹಾಗೂ ಸಂತ ಜೋಸೆಫರ ಪದವಿ ಪೂರ್ವ ಕಾಲೇಜ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಳ್ಳಿಯ ಅನುಭª Àಕ್ಕಾಗಿ ಬೆಂಗಳೂರಿನಿ0ದ ಆಗಮಿಸಿದ್ದ ೬೦ ವಿದ್ಯಾರ್ಥಿಗಳ ತಂಡವು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಹವಾಮಾನ ವೈಪಾರಿತ್ಯ ಕುರಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿ ಜಾಗೃತಿ ಜಾಥ ಮಾಡಲಾಯಿತು ಮತ್ತು ಹಕ್ಕುಗಳ ಕುರಿತು ಕಿರು ಬೀದಿ ನಾಟಕದ ಮೂಲಕ ಅರಿವಿನ ಕಾರ್ಯಕ್ರಮವನ್ನು ನೀಡಲಾಯಿತು. ನಂತರದಲ್ಲಿ ಮಾನವಿಯ ಬುಡಗ ಜಂಗಮ ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ಅಲೆಮಾರಿ ಜನಾಂಗದವರ ಜೊತೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲಿನ ಹಿರಿಯರು ತಮ್ಮ ಜೀವನ ಶೈಲಿ ಹಾಗೂ ತಾವು ಅನುಭ ವಿಸಿದ ಕಷ್ಟದ ದಿನಗಳ ಕುರಿತು ಮಾಹಿತಿಯನ್ನು ಮಕ್ಕಳೊಡನೆ ಹಂಚಿಕೊAಡರು. ಅಲ್ಲಿಯೂ ಕೂಡಾ ಮಾನವ ಹಕ್ಕುಗಳ ಕುರಿತು ಅರಿವಿನ ಕಾರ್ಯಕ್ರಮವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು, ಬೆಂಗಳೂರಿನ ನಿರ್ದೇಶಕರಾದ ಫಾ.ಅಶ್ವಿನ್ ಎಸ್.ಜೆ ಅವರು ಹಾಗೂ ೫ ಜನ ಸಿಬ್ಬಂಧಿಗಳು ಭಾಗವಹಿಸಿದ್ದರು. ಲೊಯೋಲ ಸಮಾಜ ಸೇವಾ ಕೇಂದ್ರದ ಸಿಬ್ಬಂಧಿಗಳಾದ ರವೀಂದ್ರ ಜಾನೇಕಲ್, ಮರಿಯಪ್ಪ, ಬಸವಲಿಂಗಪ್ಪ, ಬಸವರಾಜ, ವಿಜಯಲಕ್ಷಿö್ಮ ಹಾಗೂ ತಿಮಲಮ್ಮ ಇವರು ಭಾಗವಹಿಸಿದ್ದರು.
