ಯುವಮಾರ್ಗ ಸುದ್ದಿ
ಮಸ್ಕಿ,ಡಿ.12– ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ದಲಿ ತರು ಹಾಗೂ ಮುಸ್ಲಿಮರು ಸಾಕಷ್ಟು ಪ್ರಮಾಣದಲ್ಲಿ ಶ್ರಮವಹಿಸಿದ್ದಾರೆ ಆದ್ದರಿಂದ ಕಾಂಗ್ರೆಸ್ ಪಕ್ಷ ದಲಿತರಿಗೆ ಮುಖ್ಯಮಂತ್ರಿ ಮಾಡಬೇಕು ಹಾಗೂ ಜಮೀರ್ ಅಹ್ಮದ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡ ಬೇಕು ಎಂದು ದಲಿತ ಮುಖಂಡ ಕಾಸಿಂ ಡಿ ಮುರಾರಿ ಒತ್ತಾಯಿಸಿದರು.
ಮಸ್ಕಿ ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಅವರು ಸಿ ಎಂ ಸಿದ್ದರಾಮಯ್ಯನ ವರು ಮುಂದು ವರೆಯುವುದಾದಡಿe ಇನ್ನು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ವೇಳೆ ಸಿಎಂ ಅವರನ್ನು ಬದಲಾವಣೆ ಮಾಡುವುದಾದರೆ ಮುಖ್ಯ ಮಂತ್ರಿ ಸ್ಥಾನವನ್ನು ದಲಿತರಿಗೆ ಬಿಟ್ಟುಕೊ ಟ್ಟು ದಲಿತ ಮುಖ್ಯಮಂತ್ರಿಯನ್ನು ಮಾಡ ಬೇಕು. ಕಾಂಗ್ರೆಸ್ ನಲ್ಲಿ ಖರ್ಗೆ ಅವ್ರಿಗೆ ಪ್ರಮುಖ ಆದ್ಯತೆ ನೀಡಿ ಇಲ್ಲದಿದ್ದರೆ ಸತೀಶ್ ಜಾರಕಿಹೊಳಿ, ಕೆ. ಎಚ್. ಮುನಿ ಯಪ್ಪ ಆರ್. ಬಿ. ತಿಮ್ಮಾಪುರ, ಹಾಗೂ ಉಪ ಮುಖ್ಯಮಂತ್ರಿ ಸ್ಥಾನವನ್ನು ಸಚಿª Àರಾದ ಜಮೀರ್ ಅಹ್ಮದ್ ಅವರಿಗೆ ನೀಡಬೇಕು ಇದರಿಂದ ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಾಯವಾಗಲಿದೆ ಅಲ್ಲದೆ ಮುಂಬರುವ ವಿಧಾನಸಭೆ ಚುನಾವಣೆಗೂ ಅನುಕೂಲವಾಗಲಿದೆ ಎಂದು ಹೇಳಿದರು. ನಂತರ ದಲಿತ ಮುಖಂಡರಾದ ಮಲ್ಲಪ್ಪ ಗೋನಾಳ ಮಾತನಾಡಿ ಕಾಂಗ್ರೆಸ್ ಪಕ್ಷ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸಿಎಂ ಡಿಸಿಎಂ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಕಿರಣ್ ಮುರಾರಿ, ಚಿದಾನಂದ ಚಲುವಾದಿ ದುರುಗಪ್ಪ ಮುರಾರಿ, ಹುಲುಗಪ್ಪ ಹಸಮಕಲ, ಸೇರಿ ದಂತೆ ಇತರರು ಇದ್ದರು.
