October 6, 2025
1000636555

ಲಿಂಗಸುಗೂರು,ಮೇ.6- ದೂಮಪಾನ ಮತ್ತು ಮದ್ಯಪಾನ ದಂತಹ ದುಶ್ಚಟಗಳು ಮನುಷ್ಯನ ಜೀವನ ನಾಶದ ಜೊತೆಗೆ ಸಮಾಜದ ಮೇಲೂ ದುಷ್ಪರಿಣಾಮ ಬೀರಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಗುರು ಮಹಾಂತ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಸಮೀಪದ ಈಚನಾಳ ಗ್ರಾಮದಲ್ಲಿ ಮಹಾಂತ ಜೋಳಿಗೆ ಜಾಗೃತಿ ಪಾದಯಾತ್ರೆ ಕಾರ್ಯಕ್ರಮದ ಪ್ರಯುಕ್ತ ಗ್ರಾಮದ ವಿವಿಧ ಓಣಿಗಳಲ್ಲಿ, ಕರಡಕಲ್ ಗ್ರಾಮದ ಬಸವೇಶ್ವರ ಮತ್ತು ವಿಜಯ ಮಹಾಂತೇಶ್ವರ ಭಕ್ತ ಬಳಗದವರ ಸಹಯೋಗದಲ್ಲಿ, ಭಜನಾಮೇಳ ದೊಂದಿಗೆ ಜೋಳಿಗೆ ಹಿಡಿದು ಸಂಚರಿಸಿದ ಸ್ವಾಮೀಜಿಗಳು, ದುಶ್ಚಟಗಳನ್ನು ಜೋಳಿಗೆಗೆ ಹಾಕಿ ನೆಮ್ಮದಿಯ ಜೀವನ ನಡೆಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.

ನಂತರ ಬಹಿರಂಗ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಬಹುತೇಕ ಜನರು ದೂಮಪಾನ,ಮದ್ಯಪಾನ ಗಳಂತಹ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ,ಯುವಕರಿಗೆ ದುಶ್ಚಟಗಳಿಂದ ಮನೆ ಹಾಳಾಗುತ್ತಿದೆ,ಕ್ಯಾನ್ಸರ್ ನಂತಹ ರೋಗಗಳು ಹರಡುತ್ತಿವೆ ಎಂಬ ಪ್ರಜ್ಞೆ ಯಿಲ್ಲದೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇವರು ಜೀವ ಕೊಡುತ್ತಾನೆ ಆದರೆ ಜೀವನ ಕಟ್ಟಿಕೊಳ್ಳುವುದು ನಮ್ಮ ಕೈಯಲ್ಲಿದೆ, ಗುಟ್ಕಾ ತಯಾರಿಸಿದ ಕಂಪನಿಯವರು ಕೋಟ್ಯಾಧಿಪತಿ,ಗುಟ್ಕಾ ತಿಂದವ ಭಿಕ್ಷಾ ಧೀಶ ಆಗುತ್ತಿದ್ದಾರೆ, ಯುವ ಪೀಳಿಗೆ ಜಾಗೃತರಾಗಿ ದುಶ್ಚಟಗಳಿಂದ ಮುಕ್ತರಾಗಿ ಸದೃಡ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕಬೇಕು, ಜೊತೆಗೆ ಮೌಡ್ಯ ,ಕಂದಾಚಾರ ಗಳನ್ನು ನಂಬದೇ ಅವುಗಳನ್ನು ದಿಕ್ಕರಿಸಿ, ವೈಜ್ಞಾನಿಕ ವೈಚಾರಿಕ ನೆಲೆಗಟ್ಟಿನಲ್ಲಿ ನಮ್ಮ ಬದುಕನ್ನು ಕಟ್ಟಿಕೊಂಡು, ವ್ಯಸನ ಗಳನ್ನು ತ್ಯಜಿಸಿ ಸ್ವಾಸ್ತ್ಯ ಸಮಾಜ ನಿರ್ಮಾಣ ಕ್ಕೆ ಶ್ರಮಿಸೋಣ ಎಂದು ಕರೆ ನೀಡಿ, ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂಧರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಬಸನಗೌಡ ಮೇಟಿ,ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷರಾದ ಭೂಪನಗೌಡ ಕರಡಕಲ್,ಬಸನಗೌಡ ಪಾಟೀಲ್,ಗಿರಿಮಲ್ಲನಗೌಡ ಕರಡಕಲ್,ಅಮರಪ್ಪ ಗಡ್ಡಿ,ಪೀರಸಾಬ್ ಪಂಚಮ್,ಮುದುಕಪ್ಪ ಗೌಡ ಮೂಲಿಮನಿ,ಆದಪ್ಪ ಎನ್ ಮೇಟಿ,ವೆಂಕನಗೌಡ ಮೇಟಿ,ಶಿವಪ್ಪ ಹಡಪದ,ಅಮರೇಶ ಪೂಜಾರಿ,ಅಮರೇಶ ಜಿ ಮೇಟಿ,ಮುದುಕಪ್ಪ ಕುಂಬಾರ,ಸoಗಪ್ಪ ಹಳ್ಳಿ,ಯಮನಪ್ಪ ಕಟ್ಟಿಮನಿ,ಕುಮಾರಸ್ವಾಮಿ ಹಿರೇಮಠ,ದೇವರೆಡ್ಡಿ ಮೇಟಿ,ರಮೇಶ ಚಿಗರಿ,ಸಹದೇವಪ್ಪ ಕರಡಿ ,ಬಸವರಾಜ ಕುಂಬಾರ,ಮಸ್ತಾನ್ ಅಲಿ,ಸೇರಿದಂತೆ ಈಚನಾಳ ಹಾಗೂ ಕರಡಕಲ್ ಗ್ರಾಮದ ಬಸವ ಮತ್ತು ವಿಜಯ ಮಹಾಂತೇಶ್ವರ ಭಕ್ತ ಬಳಗದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!