ಮಾನ್ವಿ,ಮೇ.6-ಬೆಳಕು ಜ್ಞಾನ ದ ಸಂಕೇತವಾಗಿದ್ದು ಕತ್ತಲೆಯ ನ್ನು ಕಳೆದು ಬೆಳಕನ್ನು ನೀಡುತ್ತ ದೆ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಶಾಶ್ವತವಾಗಿರುವುದಿಲ್ಲ ಗುರುವಿನ ಕೃಪೆಯಿಂದ ಕಷ್ಟಗಳು ಕಳೆದು ಜೀವನದಲ್ಲಿ ಮತ್ತೆ ಶಾಂತಿ,ನೆಮ್ಮದಿ, ಸಂ ತೋಷವನ್ನು ಕಾಣಬಹು ದು ಎಂದು ಶ್ರೀ ಮರಿಬ ಸವದೇಶಿ ಕೇಂದ್ರ ಶಿವಾಚಾರ್ಯ ಮಹಾ ಸ್ವಾಮಿಗಳು ತಿಳಿಸಿದರು. ತಾಲೂಕಿನ ಉಟಕನೂರು ಶ್ರೀ ಅಡವಿ ಅಮರೇಶ್ವರ ಮಠದ ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅರ್ಶೀವಚನ ನೀಡಿದರು. ಉಟಕನೂರು ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ದೀಪಗಳನ್ನು ಬೆಳಗಿಸಿದರು.