December 15, 2025
IMG-20251212-WA0009

ಯುವಮಾರ್ಗ ಸುದ್ದಿ

ಲಿಂಗಸುಗೂರು,ಡಿ.12- ಸಮಾಜ ಹೆಣ್ಣನ್ನು ಸಂಸ್ಕಾರವೆAಬ ಚೌಕಟ್ಟಿನಲ್ಲಿ ಬಂಧಿಸಿ ಅವಳ ಕನಸನ್ನು ಮತ್ತು ಗುರಿಯನ್ನು ಕಸಿದುಕೊಳ್ಳುತ್ತಾ ಬರುತ್ತಿದೆ ಆದರೆ ನಿಜವಾ ದ ಸಂಸ್ಕಾರ ಎನ್ನುವುದು ತಡೆಗೋ ಡೆಗ¼ Àನ್ನು ಕಟ್ಟುವುದಲ್ಲ ಅವಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣದಿಂದ ಮಹಿಳಾ ಸಮಾನತೆ ಸಾಧ್ಯ ಎಂದು ವರದಿಗಾರ ವಿಶ್ವನಾಥ್ ಹೂಗಾರ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಡಾ. ಸುಧಾ ಮೂರ್ತಿ ಇನ್ಫೋ ಮಹಿಳಾ ಪದವಿ ಕಾಲೇಜಿನ ೨೦೨೬-೨೭ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ೭ ನೇ ದಿನದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಹೆಣ್ಣಿಗೆ ಶಿಕ್ಷಣ ಒಂದೇ ಸಾಲದು ಜೊತೆಗೆ ಸಂಸ್ಕಾರ ವು ಬೇಕೆ.ಹೆಣ್ಣೊಂದು ಕಲಿತರೆ ಶಾಲೆಒಂದು ತೆರೆದಂತೆ ಆದ್ದರಿಂದ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಎಂದರು.
ಹೆಣ್ಣು ಮಗಳ ಜೀವನ ದಿಕ್ಕಿಲ್ಲದ ದೀಪ ದಂತೆ ಆದ್ದರಿಂದ ಶಿಕ್ಷಣ ಅವಳಿಗೆ ಬದುಕು ಕೊಟ್ಟರೆ ಸಂಸ್ಕಾರ ಗೌರವ ಹೆಚ್ಚಾಗುವಂತೆ ಮಾಡುತ್ತದೆ ಹಾಗಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಂಸ್ಕಾರವನ್ನು ಜೀವನದಕ್ಕೂ ಅಳವಡಿಸಿಕೊಂಡು ಆದರ್ಶ ಬದುಕು ನಿರ್ಮಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗ ಳಿಗೆ ತಿಳಿ ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಅಮರೇಶ್ವರ ಗುರು ಷ.ಬ್ರ ಶ್ರೀಗಜಗಂಡ ಶಿವಾಚಾರ್ಯ ಮಹಾಸ್ವಾಮಿಜಿಯವರು ತಮ್ಮ ಆಶೀರ್ವ ಚನದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಎರಡು ಭಾರತೀಯ ಸಂಸ್ಕೃತಿಯ ಭಾಗವಗಿದೆ. ಶಿಕ್ಷಣ ಅವಳ ಬದುಕಿಗೆ ಬೆಳಕಾದರೆ ಸಂಸ್ಕಾರ ಅವಳ ಹೃದಯಕ್ಕೆ ಬೆಳಕಾಗುತ್ತದೆ ಇವೆರಡು ಇದ್ದಾಗ ಅವಳು ಸಮಾಜದ ಮತ್ತು ಕುಟುಂಬದ ಶಕ್ತಿಯಾಗಲು ಸಾಧ್ಯ ಅದ್ದರಿಂದ ನಿಮ್ಮ ಬಾಳಲ್ಲಿ ಇವೆರಡು ಮುಖ್ಯವಾಗಲಿ ಎಂದರು.
ಮಾರುತಿ.ಎಸ್ ಮತ್ತು ಎಇಇ ಕೆಂಚಪ್ಪ ಬಾವಿಮನಿ, ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಾದ ಅರ್ಪಿತ ಕೆ ಬಾವಿಮನಿ ಆಡಳಿತ ಅಧಿಕಾರಿಗಳಾದ ವಿನೋದ್ ಗುಡಿಮನಿ, ಪ್ರಾಚಾರ್ಯ ರಮೇಶ ವೆಂಕಟಪುರ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿ ನಿಯರು, ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!