ಪೋತ್ನಾಳ,ಡಿ.೧೧- ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಿಗಿ ಶುಲ್ಕ ಮತ್ತು ಇತರ ಸ್ಥಳೀಯ ಕರಗಳನ್ನು ಸಂಗ್ರಹಿಸಲು ಇಂದು ಮನೆ ಮನೆಗೆ ತೆರಳಿ ಕರ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಒ ಅವರು ಪ್ರತಿ ತಿಂಗಳು ಕರ ನೀಡುವ ಮೂಲಕ ಗ್ರಾಮ ಪಂಚಾಯತಿ ಸದೃಢಗೊಳಿಸಿ ಗ್ರಾಮದ ಅಭಿರುದ್ಧಿಗೆ ಸಹಕರಿಸಬೇಕು ಎಂದರು. ಇದರಿಂದ ಸಂಗ್ರಹವಾದ ಹಣವು ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತದೆ. ಈ ಅಭಿಯಾನಗಳು ಕರ ವಸೂಲಾತಿ ಪ್ರಕ್ರಿಯೆ ಯನ್ನು ಚುರುಕುಗೊಳಿಸಲು ಮತ್ತು ಗರಿಷ್ಠ ತೆರಿಗೆ ಸಂಗ್ರಹಿಸಲು ಆಯೋಜಿಸಲಾಗುತ್ತವೆ. ಕೆಲವು ಬಾರಿ ವಿಶೇಷ ರಿಯಾಯಿತಿಗಳು ಮತ್ತು ಪಾಯಿಂಟ್ ಆಫ್ ಕೇರ್ (ಪಿಒಸಿ) ಯಂತ್ರಗಳನ್ನು ಬಳಸಿ ಮನೆ ಮನೆಗೆ ತೆರಳಿ ವಸೂಲಿ ಮಾಡಲಾಗುತ್ತದೆ.
ಕರ ವಸೂಲಿ ವಿಶೇಷ ಅಭಿಯಾನದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಬಸವರಾಜ್ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಎ.ಟಿ. ರಮೇಶ್ ಕರ ವಸೂಲಿಗಾರ ಶಿವರಾಜ್ ನಾಯಕ್ ಮತ್ತು ಡಾಟಾ ಎಂಟ್ರಿ ಆಪರೇಟರ್ ನಾಗರಾಜ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
