ಮಾನ್ವಿ,ಡಿ.11- ತಾಲೂಕಿನ ಊಟಕನೂರು ಗ್ರಾಮ ಪಂಚಾಯತಿ ಸಿಬ್ಬಂಧಿ ವೇತನ ತಡೆಹಿಡಿದಿರುವ ಬ್ಯಾಂಕಿನ ಖಾತೆಯನ್ನು ಮರು ಚಾಲನೆ ನೀಡಿ ತಡೆಹಿಡಿರು ದಿರುವುದನ್ನು ತೆರವುಗೋಳಿಡಬೇಕೆಂದು ಆಗ್ರಹಹಿಸಿತು.ಉಟಕನೂರು ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಾ ಹಿಸುತ್ತಿರುವ ಸಿಬ್ಬಂದಿಗಳಿಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಇ.ಎಫ್. ಎಂ.ಎಸ್. ವೇತನ ಬಾಕಿ ಇರುತ್ತದೆ. ಸದರಿ ಬಾಕಿ ಇರುವ ಎರಡು ತಿಂಗಳ ವೇತನ ವನ್ನು ತಮ್ಮ ಆದೇಶದಂತೆ ಮಂಜೂರು ಮಾಡಿರುತ್ತಾರೆ. ಆದರೆ ಸದರಿ ಉಟ ಕನೂರು ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸದರಿ ಪಂಚಾಯತಿಯ ಎಲ್ಲಾ ಸಿಬ್ಬಂಧಿ ವೇತನ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾ ಗಿರುತ್ತದೆ. ಇದರಿಂದ ನಮಗೆ ವೇತನ ಪಡೆಯಲು ತೊಂದರೆಯಾಗಿರುತ್ತದೆ. ಅದಕ್ಕಾಗಿ ನಮ್ಮ ಸಂಘಟನೆಯ ವತಿಯಿಂದ ಉಲ್ಲೇಖ (೧) ರನ್ವಯ ಈ ಮೇಲ್ಕಾಣಿಸಿದ ದಿನಾಂಕಗಳ0ದು ಮನವಿ ಪತ್ರ ಸಲ್ಲಿಸಿದ್ದು ಇರುತ್ತದೆ.
ತಾವುಗಳು ಉಟಕನೂರು ಗ್ರಾಮ ಪಂಚಾಯತಿಯ ವೇತನ ತಡೆಹಿಡಿದಿರುವ ಬ್ಯಾಂಕಿನ ಖಾತೆಯನ್ನು ಮರು ಚಾಲನೆ ನೀಡಿ ಸಿಬ್ಬಂಧಿಗಳ ಖಾತೆಗಳನ್ನು ತಡೆಹಿಡಿರುದಿರುವುದನ್ನು ತೆರವುಗೊಳಿ ನಮಗೆ ಮಂಜೂರಾದ ವೇತನ ಪಾವತಿ ಮಾಡಿಕೊಳ್ಳಲು ಅನುಕೂಲ ಮಾಡಿ ಕೊಡಬೇಕೆಂದು ಈ ಮೂಲಕ ಕರ್ನಾಟ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ರಿ) (ಸಿ.ಐ.ಟಿ.ಯು ಸಂಯೋ ಜಿತ) ತಾಲೂಕ ಘಟಕ ಮಾನವಿ ಈ ಮೂಲಕ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಒಂದು ವೇಳೆ ಈ ನಮ್ಮ ಮನವಿಯನ್ನು ಸ್ವೀಕರಿಸಿ ೩ ದಿನಗಳೊಳಗಾಗಿ ಸಿಬ್ಬಂದಿ ವೇತನವನ್ನು ಪಾವತಿಸುವಲ್ಲಿ ವಿಳಂಭ ತೋರಿದ್ದಲ್ಲಿ ತಮ್ಮ ಗ್ರಾಮ ಪಂಚಾಯತಿ ಕಾರ್ಯಲಯದ ಮುಂದೆ ಕಾರ್ಯ ಸ್ಥಗಿತಗೊಳಿಸಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ತಮಗೆ ತಿಳಿಯಬಯಸುತ್ತೇವೆ. ಈ ಸಂದರ್ಭದಲ್ಲಿ ಅಂಬಣ್ಣ ನಾಯಕ ಅಧ್ಯಕ್ಷರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ರಿ) ಮಾನ್ವಿ, ಪ್ರಧಾನ ಕಾರ್ಯದರ್ಶಿಯಾದ ಸುಭಾನ್ ಚಿಕ್ಕೋಟ್ನೆಕಲ್, ಕಾರ್ಯಧಕ್ಷರು ಮಹಮ್ಮದ್ ನೀರಮಾನ್ವಿ ಇನ್ನಿತರರು
