October 7, 2025
ವಿಶ್ವಗುರು  ಬಸವಣ್ಣನವರು ಇಂದಿಗೂ ಕೂಡ ಪ್ರಸ್ತುತರಾಗಿದ್ದಾರೆ.: ಸೂತ್ತುರು ಶ್ರೀಗಳು

ಮಾನ್ವಿ : ತಾಲೂಕಿನ ಉಟಕನೂರು ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ಬಸವ ಪುರಾಣ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಮೈಸೂರಿನ ಸುತ್ತೂರು ಮಠದ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಆರ್ಶೀವಚನ ನೀಡಿ ವಿಶ್ವಗುರು ಬಸವಣ್ಣನವರು ಇಂದಿಗೂ ಕೂಡ ಪ್ರಸ್ತುತರಾಗಿದ್ದಾರೆ. ಜಗತ್ತಿನಾದ್ಯಂತ ಬಸವಣನವರು ಆವರಿಸಿದ್ದಾರೆ.

ಬಸವಣ್ಣನವರ ವಚನದಲ್ಲಿ ತಿಳಿಸಿದಂತೆ ಕಣ್ಣಿಗೆ ಕಾಣಿಸುವ ಪÀಶು,ಪಕ್ಷಿ,ನದಿ,ಸೇರಿದಂತೆ ಸೃಷ್ಟಿಯಲ್ಲಿ ಕಾಣುವ ಪ್ರತಿಯೊಂದರಲ್ಲಿಯು ಕೂಡಲಸಂಗಮ ದೇವನನ್ನು ಕಾಣಿ ಎಂದು ತಿಳಿಸಿದಂತೆ ಎಲ್ಲಾರಲ್ಲಿಯೂ ಪ್ರಕೃತಿಯಲ್ಲಿನ .ಪ್ರತಿಯೊಂದರಲ್ಲಿಯೂ ಕೂಡ ನಾವು ಭಗವಂತನನ್ನು ಕಾಣಬಹುದು ಕಣ್ಣಿಗೆ ಕಾಣಿಸದೆ ಇರುವ ವಸ್ತುವಿಗೆ ಭಗವಂತ ಎನ್ನಲಾಗುತ್ತಿದೆ. ಬಸವಣ್ಣನವರು ಕೊಟ್ಟಂತಹ ಕಾಯಕವನ್ನು ನಾವು ಯಾವುದೆ ಫಲಾಪೇಕ್ಷೆ ಇಲ್ಲಾದಂತೆ ಮಾಡಿದಾಗ ಮಾತ್ರ ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿನ ವೇದ ,ಉಪನಿಷತ್ತು,ಕೀರ್ತನೆಗಳಲ್ಲಿಯು ನಾವು ಭಗವಂತನನ್ನು ಕಾಣುವುದಕ್ಕೆ ಸಾಧ್ಯ, ಸಾವಿರಾರು ವರ್ಷಗಳ ಧಾರ್ಮಿಕ ಇತಿಹಾಸವನ್ನು ನಮ್ಮ ದೇಶ ಹೊಂದಿದೆ. ನಾಡಿನ ಮಠ,ಪೀಠಗಳಲ್ಲಿನ ಶ್ರೀಗಳು ಮಾಡುವ ತಪ್ಪಸ್ಸು ಪೂಜೆಗಳು ವೈಯುಕ್ತಿಕವಾಗಿದ್ದರು ಕೂಡ ಅವುಗಳಿಂದ ಸಿಗುವ ಫಲ ಎಲ್ಲಾರಿಗೂ ದೊರೆಯುತ್ತದೆ. ಜಗತ್ತಿನ ಹಲವು ದೇಶಗಳಲ್ಲಿ ಯುದ್ದ ಆಶಾಂತಿಗಳಿಗೆ ಕೇಲವು ನಾಯಕರ ವೈಯುಕ್ತಿಕ ದ್ವೇಷÀ,ಅಸೂಯ್ಯ ಕಾರಣವಾಗಿದೆ ಮನುಷ್ಯನು ನಾನು ಎನ್ನುವ ಭಾವನೆ ಬಿಡುವವರಿಗೆ ಸಂತೋಷ ಪಡುವುದಕ್ಕೆ ಸಾಧ್ಯವಿಲ್ಲ.

ಪಾಶ್ಚಿಮಾತ್ಯ ದೇಶಗಳಲ್ಲಿನ ಜನರ ಹತ್ತಿರ ಲೌಕೀಕವಾದ ಎಲ್ಲಾ ವ್ಯವಸ್ಥೆ ಇದ್ದರು ಕೂಡ ಅವರಿಗೆ ಮನಸಿಗೆ .ನೆಮ್ಮದಿ ಇಲ್ಲಾ ಜಗತ್ತು ಇಂದು ಎಷ್ಟೇ ವೇಗವಾಗಿ ,ವೈಜ್ಞಾನಿಕವಾಗಿ ತಾಂತ್ರಿಕವಾಗಿ ಮುನ್ನಡೆಯುತ್ತಿದ್ದರು ಕೂಡ ಜಗತ್ತಿನ ಜನರು ನೆಮ್ಮದಿಗಾಗಿ ಇಂದು ಭಾರತದ ಕಡೆಬರುವಂತಾಗಿದೆ. ನಮ್ಮ ದೇಶವು ಧಾರ್ಮಿಕವಾಗಿ ಅತ್ಯಂತ ಸಂಪದ್ಬರಿತವಾಗಿದ್ದು ಭಾರತದೇಶ ಹೃದಯ ಶ್ರೀಮಂತಿಕೆ ಉಳ್ಳ ದೇಶವಾಗಿದೆ.ಮಾತೃವಾತ್ಸಲ್ಯದ ರೀತಿಯ ಭಾವನೆಗಳನ್ನು ಭಾರತದಲ್ಲಿ ಮಾತ್ರ ಕಾಣಬಹುದು, ಈಡಿ ಜಗತ್ತಿನಲ್ಲಿ ಯಾರಿಗೂ ದುಃಖ ಬರಬಾರದು ಎನ್ನುವ ಸಂದೇಶವನ್ನು ನೀಡಿದ ದೇಶ ನಮ್ಮದು. ಜಗತ್ತಿನ ಎಲ್ಲಾ ಜನರು ಸುಖವಾಗಿರಬೇಕೆಂದು ಬಯಸುವ ದೇಶ ನಮ್ಮದು. ಉಟಕನೂರು ಮಠದ ಶ್ರೀಗಳಾದ ಶ್ರೀ ಮರಿಬಸವರಾಜ ದೇವರು. ಮೈಸೂರಿನ ಸುತ್ತೂರು ಮಠದಲ್ಲಿ ಅಭ್ಯಾಸಮಾಡಿ ಶ್ರೀ ಮಠದ ಮೂಲಕ ಸುತ್ತಲಿನ ಜನರಿಗೆ ನಿರಂತರ ದಾಸೋಹ,ಸಾಮಾಜಿಕ ಕಾರ್ಯಗಳನ್ನು ಮಾಡಕೊಂಡು ಬಂದಿದ್ದಾರೆ.

ಹಿರಿಯ ಶ್ರೀಗಳಾದ ಲಿಂ.ಬಸವಲಿAಗ ಮಹಾಸ್ವಾಮಿಗಳಿಗೆ ಗುರುಗಳಾದ ಅಡವಿಸಿದ್ದೇಶ್ವರರು ನೀಡಿದ ಲಿಂಗವನ್ನು ಭಕ್ತರು ದರ್ಶನ ಮಾಡಿಕೊಳ್ಳುವುದಕ್ಕಾಗಿ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಶಿಲಾ ಮಂದಿರವನ್ನು ಕಟ್ಟಿದ್ದಾರೆ. ಶ್ರೀಮಠದಿಂದ ನಿರಂತರವಾಗಿ ಧಾರ್ಮಿಕವಾಗಿ ,ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ಭಕ್ತರಿಗೆ ಒಳಿತಾಗಲಿ ಎಂದು ಹಾರೈಸಿದರು. ಮೈಸೂರಿನ ಸುತ್ತೂರು ಮಠದ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಉಟಕನೂರು ಮಠದ ಶ್ರೀಗಳಾದ ಶ್ರೀ ಮರಿಬಸವರಾಜ ದೇವರ ಪಟ್ಟಧಿಕಾರ ಅಂಗವಾಗಿ ಶ್ರೀಮಠದಿಂದ ಪೂಜವಸ್ತುಗಳನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದರು.

ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮಾತನಾಡಿ ಮೈಸೂರಿನ ಸುತ್ತೂರು ಮಠದ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳಿಂದ ಮುಖ್ಯಮಂತ್ರಿಗಳು ಕೂಡ ಶೈಕ್ಷಣಿಕ,ಸಾಮಾಜಿಕ ಅಭಿವೃದ್ದಿ ವಿಷಯಗಳಲ್ಲಿ ಮಾರ್ಗದರ್ಶನವನ್ನು ಪಡೆಯುತ್ತಾರೆ. ಉಟಕನೂರು ಮಠವು ಈ ಭಾಗದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಜನರಿಗೆ ಮಾರ್ಗದರ್ಶನವನ್ನು ಮಾಡುತ್ತ ಬಂದಿದ್ದು ಶ್ರೀಮಠದ ಹಿರಿಯ ಶ್ರೀಗಳು ತಮ್ಮ ಲೀಲೆಗಳ ಮೂಲಕ ಜನರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾರೆ ಶ್ರೀ ಮಠವು ಈಭಾಗದಲ್ಲಿ ಅತ್ಯಂತ ಭಕ್ತಿ ಹಾಗೂ ಧಾರ್ಮಿಕ ಶ್ರಾದ್ದ ಕೇಂದ್ರವಾಗಿ ಅಭಿವೃದ್ದಿ ಹೊಂದುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು, ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿAಗ ಮಾಹಾಸ್ವಾಮಿಗಳು, ಸಿಂಧನೂರಿನ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕರಾದ ಹಂಪಯ್ಯನಾಯಕ, ಹಂಪನಗೌಡ ಬಾದರ್ಲಿ,ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಪ್ರತಾಪಗೌಡ ಪಾಟೀಲ್ ಮಸ್ಕಿ ,ವೆಂಕಟರಾವ್ ನಾಡಗೌಡ, ರೈತ ಮುಖಂಡರಾದ, ಹನುಮನಗೌಡ ಬೆಳಗುರ್ಕಿ, ಮಲ್ಲಿಕಾರ್ಜುನ, ವೀರಭದ್ರಪ್ಪ ಗೌಡ ಅಲ್ದಾಳ್, ದೊಡ್ಡಬಸವನಗೌಡ ಭೋಗವತಿ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!