ಮಾನ್ವಿ,ಡಿ.1೦-ಗ್ರಾಮಗಳ ಅಭಿವೃದ್ಧಿ ಯಾಗದ ಹೊರತು ಯಾವುದೇ ದೇಶ ಅಭಿವೃದ್ಧಿ ಹೊಂದಿದ ದೇಶವೆನಿಸಲು ಸಾಧ್ಯವಿಲ್ಲ ದೇಶದ ಅಭಿವೃದ್ಧಿಗೆ ಗ್ರಾಮಗಳ ಅಭಿವೃದ್ಧಿ ಅವಶ್ಯ ಎಂದು ಉಪನ್ಯಾಸಲಿ ಹೇಳಿದರು.
ಶ್ರೀಪಂಪ ವಿರೂಪಾಕ್ಷೇಶ್ವರ ಪದವಿ ಪೂರ್ವ ಕಾಲೇಜು ಕಲ್ಮಠದ ಎನ್‌ಎಸ್ ಎಸ್ ಘಟಕದ ವತಿಯಿಂದ ತಮ್ಮಪರ ಗ್ರಾಮದಲ್ಲಿ ನಡೆಯುತ್ತಿರುವ ಎರಡನೇ ದಿನದ ವಿಶೇಷ ಉಪನ್ಯಾಸಕರಾಗಿ ಅಯ್ಯಪ್ಪ ಅಕ್ಕಸಾಲಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿ ಕಾಣಲು ಗ್ರಾಮಗಳಿಗೆ ಪ್ರಾಮುಖ್ಯತೆ ನೀಡಬೇಕು. ಮೂಲಸೌ ಕರ್ಯಗಳನ್ನು ನೀಡುವುದರ ಜೊತೆಗೆ ಸ್ವಚ್ಛತೆ, ಉತ್ತಮ ಆರೋಗ್ಯದ ಕಡೆ ಸರ್ಕಾರ ಗಮನಹರಿಸಬೇಕು. ಸ್ವಚ್ಛತೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸುತ್ತಿರುವ ಎನ್‌ಎ ಸ್‌ಎಸ್ ಶಿಬಿರಾರ್ಥಿಗಳ ಪಾತ್ರ ಮೆ ಚ್ಚ ತಕ್ಕದ್ದು ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ತಮ್ಮಾಪುರದ ಬಂಗಾರಪ್ಪ ಇವರು ಮಾತನಾಡುತ್ತಾ ಪರಿಸರದ ಸ್ವಚ್ಛತೆಗಾಗಿ ಶಿಬಿರಾರ್ಥಿಗಳ ಸೇವಾ ಮನೋಭಾವ ಬೆಳೆಸುವಲ್ಲಿ ಎನ್ ಎಸ್‌ಎಸ್ ಘಟಕದ ಕಾರ್ಯ ಶ್ಲಾಘನಿಯ ಎಂದರು. ಶ್ರೀ ರೇಣುಕಾ ಎಲ್ಲಮ್ಮ ದೇವಿ ಆಶ್ರಮದ ಕುಮಾರೆಪ್ಪ ಗುರುಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಉಪನ್ಯಾಸಕ ಉಮ ರ್ ಫಾರೂಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರ್ಟಿನ್ ಕಾರ್ಯ ಕ್ರಮ ನಿರೂಪಿಸಿ ದರು. ಪ್ರಿಯಾಂಕ ನಾಯಕ್ ಸ್ವಾಗತಿಸಿ ದರು, ಶಿಬಿರಾರ್ಥಿ ಅರವಿಂದ್ ಕುಮಾರ ವಂದಿಸಿದರು,ಮಹೇಶ್ವರಿ ಪ್ರಾರ್ಥಿಸಿದರು.
