ಸಿರವಾರ, ಡಿ.1೦-ರೈತರಿಂದ ನೂತನವಾಗಿ ಆಯ್ಕೆಯಾದ ಎಲ್ಲಾ ನಿರ್ಧೇಶಕರು ಸಹಕಾರಿ ಸಂಘದ ಬೆಳವಣಿಗೆ ಶ್ರಮಿಸಬೇಕು ಎಂದು ಹೇಮರೇಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘ ನಿ ಅದ್ಯಕ್ಷ ಅಯ್ಯನಗೌಡ ಐರೇಡ್ಡಿ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರಾದ ಶಿವರಾಜಗೌಡ, ಎನ್.ಬಸ್ಸಪ್ಪ ಗೌಡ ದೇವಪುತ್ರ,ಮಹ್ಮದ ವಾಹೀದ್ ಅಡಿವೇಪ್ಪ ದೊಡ್ಡಮನಿ.ಗ್ಯಾನಪ್ಪ ಚನ್ನಬಸವ, ಆಂಜಿನೇಯ್ಯ, ಪಂಪಾಪತಿ ನೀಲಗಲ್ ಸಿದ್ದಮ್ಮ( ದೇವರಾಜ ಸ್ವಾಮಿ) ಸಿದ್ದಮ್ಮ ( ಸೂರಿ ದುರುಗಣ್ಣ ನಾಯಕ) ಸನ್ಮಾನಿಸಿ ಮಾತನಾಡಿದ ಅವರು ಈ ಹಿಂದೆ ಈ ಸಹಕಾರಿಯು ನಷ್ಟದಲ್ಲಿ ಸಾಗುತ್ತಿತು. ಅದನ್ನು ತಡೆದು ಲಾಭಕ್ಕೆ ತಂದ ಕೀರ್ತಿ ನಿಮ್ಮಗೆ ಸಲ್ಲುತ್ತದೆ, ಅದರ ಜೊತೆಗೆ ಸಂಘಕ್ಕೆ ಆಸ್ತಿಯಾಗಿ ಗೋದಾಮು ನಿರ್ಮಿಸಿದಿರಿ ಇದೇ ನಿಮ್ಮ ಗೆಲುವಿಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ರೈತರ ಸಾಲ ಸೌಲಭ್ಯಗಳನ್ನು ನೀಡಿ. ಅನೇಕ ಯೋಜನೆಗಳನ್ನು ತಂದು ರೈತರಿಗೆ ನೀಡಬೇಕು ಎಂದರು.
ಅದ್ಯಕ್ಷ ಅಯ್ಯನಗೌಡ ಐರೇಡ್ಡಿ, ಉಪಾದ್ಯಕ್ಷ ಜೆ.ದೇವರಾಜಗೌಡ, ಸಿದ್ದರಾಮಯ್ಯಸ್ವಾಮಿ,ಗಂಗಾಧರಸ್ವಾಮಿ, ರಮೇಶ ಸ್ವಾಮಿ, ವಿಜಯಕುಮಾರ ಗುಡ್ಡದಮನೆ, ಗುರುನಾಥ ರೇಡ್ಡಿ,ಮಲ್ಲಿಕಾರ್ಜುನ, ಜ್ಞಾನಮಿತ್ರ,ಸುರೇಶಗೌಡ, ನರಸನಗೌಡ, ಹನುಮಂತ್ರಾಯ, ಮಲ್ಲಿಕಾರ್ಜುನ ಖಾನಾಪೂರು, ಮಂಜು ಜಾಲಹಳ್ಳಿ, ಅಮರೇಶ ಅಂದನಾಳ,ಶರಣಪ್ಪ ಸೇರಿದಂತೆ ಇನ್ನಿತರರು ಇದರು.
